Monday, July 9, 2012

ಸವಿ(ಕಹಿ) ನೆನಪು.....


ಸವಿ(ಕಹಿ) ನೆನಪು.....

೦೮-೦೭-೨೦೧೨ ಭಾನುವಾರ...


                  ಎಷ್ಟೋ ದಿನಗಳು ಕಳೆದಿದ್ದವು ನಮ್ಮ್ ಹುಡುಗರೆಲ್ಲ ಒಂದೆಡೆ ಸೇರಿ ಮಜಾ ಮಾಡಿ... ಕಳೆದ ಶನಿವಾರ ಬಹುದಿನಗಳ ನಂತರ ಗೌಡನ್ನ್ ನೋಡಿದ್ದು... ಅಲ್ಲೇ ಪಕ್ಕದಲ್ಲೇ ಇದ್ದ ಬಾರಿನಲ್ಲಿ ಹೋಗಿ ಕೂತೆವು... (ಬಾಟ ಮತ್ತು ನಾನು ಮುಂಚೆ ಹಲವು ಸರಿ ಕುಡಿದೆದ್ದು ಬಂದ ಜಾಗ ಅದು). ಗಾಬರಿ ಮತ್ತು ಎಸ್. ಎಸ್. ಅಮಲೆರಿಸಿಕೊಂಡಿದ್ದು, ಎಸ್.ಎಸ್. ಅದೇ ಮತ್ತಿನಲ್ಲಿ ನಾಚಿಕೆ ಆಗ್ತಾ ಇದೆ ಅಂದಿದ್ದು... ಅಹೋ ರಾತ್ರಿಯಲ್ಲಿ ಗೌಡನ ಪೆದ್ದುತನ, ಇರುಳು ರಾತ್ರಿ ಒಂದು ಗಂಟೆಯ ಸಮಯದಿ ಅಭಿಯು ಪೊಲೀಸರಿಗೆ ಇಟ್ಟ ಹಾವಳಿ.... ಮರುದಿನ ಮತ್ತೆ ಬೈಕು, ಕಾರುಗಳಲ್ಲಿ ಸುತ್ತಾಡಿದ್ದು, ಚಂದ್ರೆಗೌಡನ ನೆಂಟರ ಮನೆಯ ಮಾಂಸದ ಊಟ, ಪುಟ್ಟನ ಎರಡು ಗಂಟೆಯ ಸ್ನಾನ, ದಂಡುಪಾಳ್ಯ ಸಿನಿಮ ನೋಡಿದ್ದು, ಕೊನೆಗೆ ಮರಾಠಿಯ ಮೆಚ್ಚಿನ ಹಾಗು ನಾನು ಎಂದಿಗೂ ದುಡ್ಡು ಕೊಡದೇ ತಿಂದ ನ್ಯಾಚುರಲ್ ಐಸ್ ಕ್ರೀಂ.....


                ಅಂತು ವಾರದ ಕೊನೆಯ ರಜಗಳು ನನ್ನೀ ಮನವನ್ನು ಪ್ರಫುಲತೆ ಇಂದಿರುವಂತೆ ಮಾಡಿತ್ತು... ಮನೆ ಸೇರಿದ ನಂತರ ತುಂಬಾನೇ ಯೋಚನೆಗೊಳಪಡಿಸಿದ ಮತ್ತು ಬೇಜಾರು ಮೂಡಿಸಿದ ವಿಷಯ -  ಅದು ಗೌಡನ ಜೊತೆ ನಡೆದ ಒಂದು ಸಣ್ಣ ಮಾತುಕತೆ.


                  ಇನ್ನು ೧೨ ತಿಂಗಳಲ್ಲೇ ಗೌಡ ಮದುವೆ ಆಗುವ ಎಲ್ಲಾ ಲಕ್ಷಣಗಳು ಎದ್ದು ತೋರುತ್ತಿವೆ. ಆದರೆ ಮದುವೆಗೆ ಮುಂಚೆನೇ ತನ್ನನ್ನೇ ತಾನು ವ್ಯಾಪಾರಕ್ಕೆ  (ವರದಕ್ಷಿಣೆ) ಇಟ್ಟು ಕೊಂಡಿರುವ ಗೌಡನನ್ನು ನೋಡಿ ನನ್ನೀ ಮನಸ್ಸೇಕ್ಕೋ ಮಮ್ಮಲ ಮರುಗುತ್ತಿದೆ....


                           ಇದಕ್ಕೆ ಗೌಡನ ವಿಮರ್ಶೆ ----> ತಾನು ವರದಕ್ಷಿಣೆ ತೆಗೆದುಕೊಳ್ಳುವುದಿಲ್ಲವಂತೆ. ಆದರೆ......... ಆದರೆ ಹೆಣ್ಣಿನ ಮನೆಯವರು ಕೊಡುವುದೆಲ್ಲವನ್ನು ಮದುವೆಯ ಉಡುಗೊರೆ ಎಂದು ಭಾವಿಸಿ ಸ್ವೀಕರಿಸುತ್ತಾನಂತೆ.


            ಛೇ.... ನಮ್ಮ್ ಹುಡುಗ ಈ ತರ ಅಂಥಾ ನಾನು ಎಂದು ಅಂದುಕೊಂಡಿರಲಿಲ್ಲ... ಭವ್ಯ ಭಾರತದ ಕನಸನ್ನು ಕಂಡ ನಾವೆಲ್ಲಾ ಎಲ್ಲಿ ಸಾಗುತ್ತಿದ್ದೇವೆ. ಯುವಪೀಳಿಗೆ ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ಆದರ್ಶಮುಖಿಯಾಗಿರಬೇಕು. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ.. ವರದಕ್ಷಿಣೆ ಎಂಬ ಪೀಡೆ ನಮ್ಮಿ ಭಾರತದಿಂದ ತೊಲಗುತ್ತಿದೆ ಎಂದು ನಾ ನಂಬಿದ್ದೆ. ಆದರೆ ಅದೆಲ್ಲ ಸುಳ್ಳೆಂದು ನನಗಿಂದು ಅರಿವಾಗುತ್ತಿದೆ..


        ಎಲ್ಲರು ಹೇಳುವರು ಈ ಸಮಾಜದ ವ್ಯವಸ್ಥೆನೇ ಸರಿ ಇಲ್ಲ ಎಂದು. ಆದರೆ ಯಾರು ಕೂಡ ವ್ಯವಸ್ಥೆ ಸರಿಪಡಿಸುವ ಗೋಜಿಗೆ ಹೋಗುತಿಲ್ಲ. ಇನ್ನು ಕೆಲವರು ಹೇಳುತ್ತಾರೆ, ಈ ಸಮಾಜದ ವ್ಯವಸ್ಥೆಯನ್ನು ಬದಲಾಯಿಸಲು ಹೊರಟರೆ ಈ ವ್ಯವಸ್ಥೆಯೇ ನಮ್ಮನ್ನು ಬದಲಾಯಿಸುತ್ತದ್ದೆ ಎಂದು. ಪ್ರತಿ ಒಬ್ಬರು ಸ್ವಪ್ರಯತ್ನದಿಂದ ತಮ್ಮ ತಮ್ಮನು ವ್ಯವಸ್ಥೆಯ ಬದಲಾವಣೆಗೆ ತೊಡಗಿಕೊಂಡರೆ ತನ್ನಿಂತಾನೆ ಈ ಸಮಾಜದ ವ್ಯವಸ್ಥೆಯೇ ಬದಲಾಗುತ್ತದೆ....


                         ಯುವಪೀಳಿಗೆಗೆ ಅಂದು ವಿವೇಕಾನಂದರು ಕೊಟ್ಟ ಸಂದೇಶ " ಏಳಿ, ಎದ್ದೇಳಿ ಯುವ ಜನತೆ, ಎಂದಿಗೂ ನಿಲ್ಲದಿರಿ ಗುರಿ ಮುಟ್ಟುವ ತನಕ".... ಆದರೆ ನಮ್ಮೀ ಯುವಜನತೆ ಇಂದಿಗೂ ತೂಗುಡಿಸುತ್ತಲೇ  ಇದೆ... 




                                                                         -- ಇಂತಿ ನಿಮ್ಮ,
                                                                            ದಿನೇಶ್..... 

No comments:

Post a Comment