Thursday, August 16, 2012

ನಾನು, ನನ್ನವಳೊಂದಿಗೆ ಮತ್ತು ನಿಮ್ಮೊಂದಿಗೆ.....


ನಾನು, ನನ್ನವಳೊಂದಿಗೆ ಮತ್ತು ನಿಮ್ಮೊಂದಿಗೆ..... 

22-02-2012...

    ನಾನು ಬರೆದ ಕಿತ್ತೊದ ಬರಹ ಮತ್ತು ನೀವು.....

ನನ್ನ ಬರಹ ಅಥವಾ ಕಥೆಗಳನ್ನು ಓದಿದ ಮತ್ತು ಓದದ ಎಲ್ಲಾ ಗೆಳೆಯ ಗೆಳತಿಯರೆಲ್ಲರಿಗೂ ಧನ್ಯಾವಾದಗಳು....

"ಒಂದೇ ಸಮನೆ ನೆನಸಿದೆ ನನ್ನೀ ಮನಸ್ಸು ನಿನಗಾಗಿ ನಿನಗಾಗಿ....."
ಈ ಸರಿ ರಾತ್ರಿ ನಾನು ಪದೇ ಪದೇ ಮಲಗುವ ಮುನ್ನವೂ ಗುನುಗುವಂತೆ ಮಾಡಿತು.... ಕಳೆದ ಒಂದು ತಿಂಗಳಿನಿಂದ ನನ್ನ ಹುಡುಗಿಯೊಂದಿಗೆ ಮಾತನಾಡದೆ ಪರಿತಪಿಸುತ್ತಿರುವ ಮನವು ಸಂತೋಷದಿ ಮುಳುಗಿ ತೇಲಿತ್ತು. ನನ್ನ ಮತ್ತು ನನ್ನ ಹುಡುಗಿಯ ಪ್ರೀತಿಯು ಚಿಗುರೊಡೆದು ಒಂಭತ್ತು ವಸಂತಗಳೇ ಸಂದರು ಅವಳನ್ನು ಪ್ರಥಮ ಬಾರಿಗೆ ಕಾಣಬೇಕೆಂಬ ಹಂಬಲ ದಿನೇ ದಿನೇ ಅತಿಯಾಗುತ್ತಿದೆ.. ಚಿನ್ನ ಒಮ್ಮೆಯಾದರು ನಿನ್ನ ಮೊರೆಯನ್ನು  ಈ ಹೃದಯದರಸನಿಗೆ ತೋರುವೆ....

ಕಳೆದ ಬಾರಿಯ ಹಾಗೇ ಆದೇ ತಂಡ ಮತ್ತು ಇನ್ನಷ್ಟು ಗೆಳೆಯರು (ಗೊಣ್ಣೆ, ಪ್ರಸಾದಿ, ಟೈಗರ್, ತೊಟ್ಟಿ ಮತ್ತು ಆನಂದ್) ಒಂದೆಡೆ ಸೇರಿದೆವು. ಮತ್ತೇ ಅಮಲೇರಿಸಿಕೊಂಡ ಹುಡುಗರೊಂದಿಗೆ ಮಧ್ಯರಾತ್ರಿ ಬನಶಂಕರಿಯ ಸುಬ್ಬನ ಮನೆಯ ಕಡೆ ಹೊರಟಾಗ ಭರ್ತಿ 12 ಗಂಟೆ. ರೂಮೊಳು  ಸೇರಿ ಮುಂಜಾವು ೪ರವರೆಗೂ ರಷ್ಯನ್ ರಮ್ಮಿ ಆಡಿದ್ದು .. ಅದರಲ್ಲಿ ಎರಡು ಬಾರಿಯೂ ನಾನು 1500 ಅಂಕಗಳನ್ನು ಪಡೆದಿದ್ದು. ಮತ್ತೇ ಮುಂಜಾನೆ 8 ಗಂಟೆಗೆ ಎದ್ದಾಗ ಹಿಂದಿನ ಸಂಜೆ ಬರುವೆ ಎಂದಿದ್ದ ಸೋಮಾರಿ ಪುಟ್ಟ ಅಂತು ಇಂತು ತನ್ನ ದರ್ಶನ ಕೊಟ್ಟನು..

ಗೊಣ್ಣೆಯ ತಮ್ಮಣ್ಣ-ತಿಮ್ಮಣ್ಣ, ಅಭಿಯ ಮೇಲಿಂದ ಮೇಲೆ ಹಾರಿ ಹಾಡು, ಗೊಣ್ಣೆಯು ತನ್ನ ಪ್ರೀತಿಯ ಗೆಳತಿಯ ಜಂಗಮವಾಣೆಯ ಕರೆ ಬಂದಾಗ ಚಂಗನೆ ಹಾರಿದ್ದು... ಸುಬ್ಬನ ಸಮಾಜ ಸೇವೆ, ದೇಶದ ಒಳಿತಿಗಾಗಿ ತನ್ನನ್ನೇ ತಾನು ಮುಡಿಪಿಟ್ಟುಕೊಂಡಿದ್ದು, ಇದರ ಮದ್ಯೆ ಊಟಕ್ಕಾಗಿ ನಾನು ಮತ್ತು ಅಭಿ ದಾರಿ ತಪ್ಪಿದ ಮಕ್ಕಳಂತೆ ರಸ್ತೆಯೆಲ್ಲ  ಸುತ್ತಾಡಿದ್ದು...    

                ಅಂದೇ ಸಂಜೆ ಮಸಾಲೆ ಪುರಿ ತಿನ್ನುವ ತವಕದಲ್ಲಿ ಎಲ್ಲಾರೂ ಎದ್ದು ಸೀತಾ ಸರ್ಕಲ್ ಕಡೆಗೆ ಸಾಗಿದೆವು... (ಸಿಗ್ನಲ್ ಬಿಡುವ ಮುನ್ನವೇ ವಾಹನ ದಟ್ಟಣೆ ಕಡಿಮೆಯಾಗುವುದು ಸೀತಾ ಸರ್ಕಲ್ ನ ಮತ್ತೊಂದು ವೈಶಿಷ್ಟ್ಯ...) ಅಲ್ಲೇ ಮಸಾಲೆ ಪುರಿ ತಿನ್ನುತ್ತಿದ್ದ ಬಾಲೆಯೆಡೆಗೆ ನಮೆಲ್ಲರ ಗಮನ ಸೆಳೆಯಿತು. ಅವಳು ತೊಟ್ಟಿದ್ದ ಅ ಕಪ್ಪು ವಸ್ತ್ರವು ಅವಳ ದೇಹ ಸಿರಿಯನ್ನು ಮತ್ತು ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು.... ಅವಳ ಗೆಳೆಯನೊಡನಿದ್ದರಿಂದ ಅವಳೆಡೆಗೆ ನಾವ್ಯಾರು ಹೆಚ್ಚಿಗೆ ಗಮನ ಹರಿಸಲಿಲ್ಲ. ಕಡೆ ಕ್ಷಣದಿ ಗೆಳೆಯರನ್ನು ತೊರೆದು ಪೆದ್ದು ಮರಾಟಿಯ ವಾಹನದಲ್ಲಿ ಮನೆ ತಲುಪಿದಾಗ ಬಾನೊಳು ಸೂರ್ಯನು  ಮೂಡಿಸಿದ್ದ ಕೆಂಪನೆ ಚಿತ್ತಾರವು ಮಾಯವಾಗಿತ್ತು.......

                            -- ಇಂತಿ,
                                ನಿಮ್ಮ ನಲ್ಮೆಯ ಗೆಳೆಯ,
                                 ಅವಳ ಹೃದಯದರಸ,
                                     ದಿನೇಶ್.......

Sunday, August 5, 2012

ನಾನೂ ಮತ್ತು ನನ್ನವಳು......


                                                ನಾನೂ ಮತ್ತು ನನ್ನವಳು......

              ನನ್ನ್ ಜೀವನ ಇತರ ಆಗುತ್ತೇ ಅಂತ ನಾನು ಯಾವತ್ತು ಅಂದುಕೊಂಡಿರಲಿಲ್ಲ ಕಣ್ನ್^ರೀ. ಬಿ. ಇ. ಮಾಡುವಾಗ ಮನೇಲಿ ಕೊಡಿಸಿದ್ದ ನೋಕಿಯ ೧೧೧೦(1110) ಮತ್ತು ನಾನು ೨೬೦೦(2600) ರುಪಾಯಿಯ ಸಂಬಳದ ಕೆಲಸ ಮಾಡುತ್ತಿದ್ದಾಗ ತಗೊಂಡ ನೋಕಿಯ ೬೩೦೩(6303) ಮೊಬೈಲ್ಗಳು ಒಂದೇ ಸಮಯಕ್ಕೆ ಕೈ ಕೊಟ್ಟರೆ ಎಂಗ್ ಆಗಬೇಡ ಹೇಳಿ ನನ್ನ್ ಪರಿಸ್ಥಿತಿ. ಇಗೇ ಕಿತ್ತು ಹೋಗಿರೋ ಮೊಬೈಲ್ ಗಳನ್ನ ಉಪಯೋಗಿಸುತ್ತಿರುವ ನಾನು ಮತ್ತು ನನ್ನನ್ನು ಭಾವುಕನಾನ್ನಗಿಸಿ ನನ್ನ್ ಕಣ್ನ್^ಲ್ಲೇ ಕಣ್ಣೇರು ತರಿಸಿದ "ಅವಳು".....


            ನಾನು ಹೇಗೆ ವಿಚಿತ್ರನೋ ಆಗೇ ನನ್ನ ಪ್ರೀತಿನೂ ಕೂಡ ಅಷ್ಟೇ ವಿಚಿತ್ರವಾಗಿರಬೇಕೆಂದೇ ನಾ ಬಯಸಿದ್ದೆ. ಅದು ಕೂಡ ನಡೆದೇ ಹೋಯ್ತು ಕಣ್ನ್^ರೀ. ನೋಡಿ ಮಾಡಿದ ಪ್ರೀತಿನೇ ಈಗಿನ ಕಾಲದಲ್ಲಿ ಉಳಿಯೋದಿಲ್ಲ ಅಂತಾರೆ. ಆದರೆ... ಆದರೆ ನಾನು ನನ್ನ ಹುಡುಗಿನ ನೋಡದೆ ಪ್ರೀತಿ ಮಾಡ್ಬಿಟ್ಟೆ. ಈ ನನ್ನ್ ಪ್ರೀತಿ ಇಂದಿಗೂ ಎಂದಿಗೂ ಎಂದೆಂದಿಗೂ ಅಜರಮರವಾಗಿರಲಿ ಎಂದು ನಾ ಆಶಿಸುವೆ....


               ಈ ಸಂಜೆ ಬಂದ ಮಳೆಗೆ ಈ ಕೆಳಗಿನ ಸಾಲುಗಳು ಪದೇ ಪದೇ ನೆನಪಿಗೆ ಬರುತ್ತಿವೆ.
" ನಾವಿಬ್ಬರು ಸುರಿಯುವ ಮಳೆಯಲಿ, ಮೈ ಕೊರೆಯುವ ಚಳಿಯಲಿ, ಒಂದೇ ಕೊಡೆ ಕೆಳಗೆ ಕೈ ಕೈ ಹಿಡಿದು ನಡೆಯೋ ಆಸೆಯೂ.... (ಈ ಮೇಲಿನ ಸಾಲುಗಳು ನಾನಂತು ಬರೆದಿದ್ದಲ್ಲ, ಮುರಳಿ ಮೀಟ್ಸ್ ಮೀರಾ ಸಿನಿಮಾದ್ದು....)


                 ಪ್ರಿಯೆ ನನ್ನೀ ಪುಟ್ಟ ಹೃದಯದಲಿ ನಿನಗೆಂದೇ ಪುಟ್ಟದಾದ ಕನಸಿನ ಗೂಡನ್ನೇ ಕಟ್ಟಿ, ನಿನಗಾಗಿಯೇ ಹಾತೊರೆಯುತ್ತ, ಪರಿತಪಿಸುತ್ತಾ ಕಾಯುತ್ತಿರುವೆ... ಎಂದಾದರು ಸರಿಯೇ ನನ್ನೀ ಕೊನೆಯುಸುರಿನೊಳಗೆ ಬಂದು ಸೇರುವೆ ಎಂದು ಅಂಬಲಿಸುತ್ತಿರುವ .......     




                                                       -- ಇಂತಿ, 
                                                     ನಾ ನಿನ್ನ ಪ್ರೇಮಿ ಖಂಡಿತ
                                                             ದಿನೇಶ್.....