Monday, February 6, 2012

ಪ್ರೀತಿಯ ಅರಗಿಣಿ.....


ಪ್ರೀತಿಯ ಅರಗಿಣಿ,


        ಭುವಿಯೊಳು ನೆಟ್ಟ ಪ್ರತಿ ಬೀಜವು ಚಿಗುರೊಡೆಯಲು ಹಾತೊರೆಯುತ್ತಿರುವ, ಆಗೆಯೇ ನಾನು ಕೂಡ ನಿನ್ನ ಅನುರಾಗದಲ್ಲಿ ಮಿಳಿತವಾಗಬೇಕೆಂದು ಬಯಸುತ್ತಿರುವೆ.

        ನನ್ನ ನಿನ್ನ ನಡುವೆ ಮೊದಲ ಬಾರಿಗೆ ಪುಟ್ಟದೊಂದು ಮನಸ್ತಾಪ ಬಂದಾಗ ನನ್ನಲ್ಲಿ  ಮೂಡಿದ ಕೆಲವು ಸಾಲುಗಳು, ನನ್ನಯ ಹೃದಯದರಸಿ ಕನಸಿನ ರಾಣೆಗೆಂದೇ ಅರ್ಪಣೆ ಸಮರ್ಪಣೆ.....


          " ಎಂದಿಗೂ ಫಲ ಕೊಡದ ಬೀಜದ೦ತಿರಲು ನಿನ್ನಯ ಹಸ್ತದಿ ಚಿಮುಕಿಸಿದ ಪನ್ನೀರು ಎನಗೆ ಅಮೃತವೇ ದೊರೆತಂತೆ ಬದುಕಬೇಕೆ೦ಬ ಆಸೆಯೂ ಮೂಡಿಸಿದೆ.


          ಚಿಗುರನ್ನೇ ಕಾಣದ ಈ ದೇಹ ಅವಳ ಸ್ಪರ್ಶಕ್ಕೆ, ಎಲ್ಲೆಡೆಯೂ ಹಚ್ಚ ಹಸಿರನ್ನೇ ಹೊದ್ದು ತಳಿರಾಗಿ ನಲಿಯುತಿದೆ.


          ಎಂದೆದಿಗೂ ಅರಳದ ಪ್ರೀತಿಯ ಮೊಗ್ಗು ನಿನ್ನಯ ಕಿರುಗಣ್ಣಿನ ನೋಟಕ್ಕೆ ಅರಳಿದೆ.


          ಬರೀಯ  ಕಾಯಲ್ಲೇ ರುಚಿ ಎಂದಿದ್ದ ಈ ತನುಮನವು ಹಣ್ಣಲ್ಲೂ ರುಚಿ ಇದೇ ಎನ್ನುವ ಪರಿಬಾಷೆ ತಂದವಳು ನೀನು.


         ಮಾಗಿ ಗಾಲದೀ ಬೀಸುವ ಗಾಳಿಗೆ ಉದುರುವ ತರಗಲೆಯಾಗುವ ಮುನ್ನವೇ ನನ್ನನ್ನು ಸಮರ್ಪಿಸಿಕೋ.........."




                                   -- ಇಂತಿ,
                               ನಿನ್ನ ನಗುಮೊಗವ ಕಾಣಲೆಂದೇ ಇಂದಿಗೂ ಕಾಯುತಿರುವ,


                                 ನಿನ್ನಯ ಪ್ರೀತಿಯ ಒಡೆಯ..........

No comments:

Post a Comment