Tuesday, November 16, 2010

ಇನ್ನಷ್ಟು.....





ನಡೆದಿದ್ದೂ ಎಷ್ಟೋ,
ಕಾಲು ನೋಯಿಸಿಕೊಂಡಿದ್ದು ಎಷ್ಟೋ,
ಕಣ್ಣೆಗೆ ಕಂಡಿದ್ದು ಎಷ್ಟೋ,
ಕಾಣದಿದ್ದು ಎಷ್ಟೋ,
ಮನ ತಂಪು ಮಾಡಿದ್ದು ಇನ್ನೆಷ್ಟೋ,
ಆದರೆ,
ಅವಳ ನೆನಪು ಬೇಕು ಇನ್ನಷ್ಟು ಮತ್ತಷ್ಟು........

....ಕ್ಷಣೆಕ ಮಾತುಗಳು......

ಸುಯ್ ಎಂದು ಬೀಸುವ ತಂಗಾಳಿ, ನನಗೊಂದು ನಿನಗೊಂದು ಎನ್ನುವ ಪುಟ್ಟ ಬಾಲಕ, ತಾಳ್ಮೆ ಕಳೆದುಕೊಂಡು ಅವಳನ್ನೆ ನೋಡುತ್ತಿರುವ ನಾನು, ನಾಚಿ ನೀರಾಗಿ ತಲೆ ತಗ್ಗಿಸಿರುವ ಇವಳ ಅಕ್ಕ...... 

....ಕ್ಷಣೆಕ ಮಾತುಗಳು......




ಕರ್ರುಮ್ ಕರ್ರುಮ್ ಎನ್ನುವ ಚುರುಮುರಿ, ಗರ್ರನೆ ಎಂದಿಗೆ ನಿಲ್ಲುವೇನೊ ಎಂದು ತಿರುಗುತಿರುವ ಫ್ಯಾನು, ಅವರ ಪಾಡಿಗೆ ಮಾತಾನಾಡುತಿರುವ ಸಹ ಪ್ರಯಾಣಿಕರು, ಕಣ್ಣೆದಿರು ಕಣ್ಣ್ ಮುಚ್ಚಿರುವ ಇವಳು...........

....ಕ್ಷಣೆಕ ಮಾತುಗಳು......




ಭರ್ರೋ... ಎಂದು ಶಬ್ದ ಮಾಡುವ ಗಣಕಯಂತ್ರದ ಸಿ.ಪಿ.ಯು., ಏನು ಅರಿಯದವನ ಹಾಗೆ ಕುಳಿತಿರುವ ರೂಮಿನ ಗೆಳೆಯ, ಚಾಪೆಯ ಮೇಲೆ ಸಾವಿರ ಕನಸನ್ನು ಹೊತ್ತಿರುವ ನಾನು, ದೂರದಿಂದಲೇ ಕಾಡುತಿರುವ ಅವಳು....

....ಕ್ಷಣೆಕ ಮಾತುಗಳು......



ನಾನು ಬೆಳಗ್ಗೆನೆ ಎದ್ದೆ, ಬಾತ್ ರೂಮಿನಲ್ಲಿ ನೀರಿನ ಶಬ್ದ ಆಗುತ್ತಿತ್ತು, ಪಕ್ಕದಲ್ಲೆ ಗೊರಕೆ ಜೋರಾಗಿತ್ತು, ಅವಳು ಆಗಲೇ ಕನಸಲ್ಲೀ ಬಂದು ಹೋಗಿದ್ದಳು, ಮೊಬೈಲ್_ನಲ್ಲಿ ಅವಳ ಮೆಸೆಜ್ ಇತ್ತು......!!!!!