Friday, October 26, 2012

ಕೊನೆ ಬರಹ...


                                    ಕೊನೆ ಬರಹ...


               ನನ್ನ್ ಹೃದಯ ಇವತ್ಯಾಕ್ಕೋ ತುಂಬಾ ಖುಷಿಯಾಗಿದೆ ಕಣೋ... ಕಳೆದ 27 ವರ್ಷಗಳಿಂದ ಕೆಲಸ ಮಾಡಿ ಮಾಡಿ ನನ್ನ್ ಹೃದಯಕ್ಕೂ ಬೇಜಾರಾಗಿದೆ. ಅದರ ಕೆಲಸ ಇವತ್ತಿಗೆ ನಿಂತು ಹೋಗುತ್ತಲ್ಲ ಅಂತ ಅದುಕ್ಕೆ ಖುಷಿ ಆಗಿದೆ. 26 ವರ್ಷ ಮನೆಯವರು ನನ್ನ ಬದುಕಿಸಿದ್ದರು. ಕಳೆದ 11 ತಿಂಗಳಿಂದ ನಿನಗಾಗಿ ಬದುಕಿದ್ದೆ. ಆದರೆ 9 ತಿಂಗಳಿಂದ ಮನೆ ಬಿಟ್ಟು ಬಂದಗಿಂದಲೂ ನಾನು ನಿನ್ನಗೋಸ್ಕರನೆ ಬದುಕಿದ್ದೆ... ಆದರೆ ಈಗ.......... ನಿನ್ನೆ, ನಾನೇ ನಿನ್ನ ಬಿಟ್ಟೆನೋ ಅಥವಾ ನೀನೆ ನನ್ನಿಂದ ದೂರ ಆಗ್ತಾ ಇದಿಯೋ ಅಂತ ನನಗಂತು ಗೊತ್ತಾಗ್ತಾ ಇಲ್ಲ... ಇಷ್ಟು ದಿನ ನಿನಗಾಗಿ ಬದುಕಿದ್ದೆ ಇನ್ನು ಮುಂದೆ ಯಾರಿಗೋಸ್ಕರ ಅಂತ ಬದುಕಲಿ ಹೇಳು.... ಮನೆಯವರಿಲ್ಲ, ಜೊತೆಗೆ ನೀನು ಕೂಡ ಇವತ್ತು ನನ್ನ್ ಜೊತೆ ಇಲ್ಲ ಕಣೋ ಕಂದ.... ನಾನಿಗೆ ಯಾರು ಇಲ್ಲ ಅಂತ ನಿನಗೂ ಗೊತ್ತು. ಅದುಕ್ಕೆ ಸಾಯೋ ತೀರ್ಮಾನಕ್ಕೆ ಬಂದಿದೀನಿ. ಹೇಗೆ ಸಾಯ್ತಿನಿ, ಯಾವಾಗ ಸಾಯ್ತಿನಿ ಅಂತ ನನ್ನಗು ಗೊತ್ತಿಲ್ಲ... ನಿನ್ನ್ ಇಲ್ಲ ಅಂದ ಮೇಲೆ ನಾನು ಬದುಕಿದ್ದದರು ಏನು ಪ್ರಯೋಜನ ಹೇಳು...

              ನಾನು ಯಾವತ್ತು ದುರ್ಬಲ ಬುದ್ದಿ, ದುರ್ಬಲ ಮನಸ್ಥಿತಿ ಇರೋನು ಅಂತ ಅಂದುಕೊಂಡಿರಲಿಲ್ಲ. ಆದರೆ ಈ ಪರಿಸ್ಥಿತಿ ನನ್ನನು ಸಾವಿಗೆ ತಂದು ಬಿಟ್ಟಿದೆ....
ಚೇತನ್ (ಗಾಬರಿ) ನಿನ್ನ್ ಹೇಳಿದ್ದು ಸರಿ ಕಣೋ " ಮನೆಗೆ ಮಗ ಆಗಲಿಲ್ಲ, ಸ್ಮಶಾನಕ್ಕೆ ಹೆಣ ಆಗಲಿಲ್ಲ" ಅಂತ.. ಅದು ಇವತ್ತು ನನ್ನಗೆ ಅರ್ಥ ಆಗ್ತಾ ಇದೆ...
ನಾನು ಸಾಯಬೇಕು ಅಂದುಕೊಂಡಿದ್ದು ಪೂರ್ವನಿಯೋಜಿತವಲ್ಲ. ನನ್ನ ಸಾವಿಗೆ ಯಾರು ಕಾರಣರಲ್ಲ.

                       ಕೊನೆಯಾದಾಗಿ ಕಂದ, ನಾನು ನಿನ್ನ್ ಗೆ ಹೇಳ್ತಾ ಇದ್ದೆ ನಾನು ಕೊನೆವರೆಗೂ ನಿನ್ನೇ ಪ್ರೀತಿಸ್ತಿನಿ ಅಂತ. ಅಲ್ಲ ಕಣೋ ನಾನು ಸತ್ತ ಮೇಲು ನಿನ್ನೇ ಪ್ರೀತಿಸ್ತ ಇರ್ತಿನಿ. ಬದುಕಿದ್ದಾಗಲಾದರು ನಾನು ನಿನ್ನ ನೋಡಲಿಲ್ಲ, ನೀನು ನನ್ನ ನೋಡಲಿಲ್ಲ. ಒಂದೇ ಒಂದು ಸಲ ನಾನು ಸತ್ತ ಮೇಲಾದರೂ ನನ್ನ ಬಂದು ನೋಡ್ಕೊಂಡು ಹೋಗು.....

ದಿನಾಂಕ     
27/09/2012                     
                                                      -- ಇಂತಿ,
                                                ಹುಚ್ಚ, ನಿನ್ನ ಪ್ರೀತಿಯ ಹುಚ್ಚ .
                                                       ದಿನೇಶ್        



ಇಷ್ಟೇ ಕಣ್ರಪ್ಪ ಬರೆದಿದ್ದು.... ಅಷ್ಟೇ ನನ್ನ್ ಹುಡುಗಿ ಉಗುದ್ಲು ಉಗುದ್ಲು ಉಗುದ್ಲುssssssss ..... ಹೇಳಿ ಕೇಳಿ ನನ್ನ್ ಹುಡುಗಿ ತುಂಬಾ ಸ್ಟ್ರಾಂಗ್ ಬೇರೆ.... ನನ್ನ ಹುಚ್ಚು ಎಲ್ಲ ಬಿಡಿಸೇಬಿಟ್ಟಳು... ಅವಾಗಲೇ ನೋಡ್ರಿ ನನ್ನ ಕೈಗೆ ಹೊಸ ನೋಕಿಯಾ ೧೦೦ ಮೊಬೈಲ್ ಬಂದಿದ್ದು.....  ನೀವೇ ಏನೇ ಹೇಳಿ ನನ್ನ್ ಹುಡುಗಿ ನನ್ನ್ ಹುಡುಗಿನೇ....  ಕಂದ  ನನ್ನ್ ಕಡೆ ಇಂದ ಒಂದು ಪ್ರೀತಿಯ ಮುತ್ತು ಕಾಣೋ......