Tuesday, January 1, 2013

......................೩೧-೧೨-೨೦೧೨.....................




ಆತ್ಮೀಯ ಗೆಳೆಯ ಗೆಳತಿಯರಿಗೆ ಹೊಸ ವರುಷದ ಹಾರ್ದಿಕ ಶುಭಾಶಯಗಳು...... 

೨೦೧೨ ನೇ ವರ್ಷ ಮರೆಯಲಾರದ ವರುಷವಾದರೆ ಆಗೇ ೩೧-೧೨-೨೦೧೨ ಕೂಡ ಅಷ್ಟೇ ಮರೆಯಲಾಗದ ದಿನ. ಅಹೋ ರಾತ್ರಿ ಗೆಳೆಯರೊಡಗೂಡಿ ಬೆಂಗಳೂರಿನ ಹೊರವಲಯಕ್ಕೆ ಸಂಚರಿಸಿ ಅಲ್ಲಿ ಹೊಸ ವರುಷವ ಆಗಮಿಸಿಕೊಂಡಿದ್ದು ಮತ್ತೊಂದು ಮರೆಯಲಾಗದ ಸಂಗತಿ. ತಣ್ಣನೆ ಕೊರೆಯುವ ಚಳಿಯಲ್ಲಿ ನಮ್ಮ್ ಚಂದ್ರಿ ಬೈಕ್ನಲ್ಲಿ ಕೂತು ೭೦ ಕಿ.ಮೀ  ದೂರ ರಾಮನಗರದ ಕಡೆ ಸಾಗಿದೆವು. ನಿಗದಿ ಪಡಿಸಿದ ಸ್ಥಳ ಸೇರಿದಾಗ ಕೆಲ ಹಳೆ ಗೆಳೆಯರ ಕಂಡೊಡನೆ  ಖುಷಿಯೋ ಖುಷಿ. ಅಲ್ಲೇ ಒಂದು ಕಡೆ ಮರದ ಕೊರಡುಗಳನ್ನು ಒಟ್ಟು ಸೇರಿಸಿ ಬೆಂಕಿ ಹೊತ್ತಿಸಿ ಅದರ ಸುತ್ತ ಕೆಲವು ಗೆಳಯರು ಕೂತರೆ ಮತ್ತೆ ಕೆಲ ಗೆಳಯರು ಬೆಂಕಿಯ ಹಿತ ಪಡಿಯಲು ಅಲ್ಲೇ ನಿಂತು ಒಬ್ಬರು ಇನ್ನೊಬ್ಬರ ಕುಶಲೋಪಚರಿ ವಿಚಾರಿಸುತ್ತಿದ್ದರು. ಸಮಯ ಸರಿದ ಹಾಗೆ ಎಲ್ಲರ ಹೊಟ್ಟೆ ಒಳಗೆ ಪರಮಾತ್ಮ ಸೇರಿದೊಡನೆ ಶುರುವಾಯ್ತು ನೋಡಿ ನಮ್ಮ್ ಹುಡುಗರ ಮೊಗದಲ್ಲಿ ಖುಷಿ. ಕೆಲವರಂತು ಮರು ದಿನ ಸಂಕಷ್ಟಿ ಎಂದು ನಾಟಕ ಮಾಡುತ ಮತ್ತೆ ಮತ್ತೆ ಪರಮಾತ್ಮನನ್ನು ತಮ್ಮೊಳಗೆ ಸೇರಿಸಿಕೊಳ್ಳುತ್ತಿದ್ದರು. ಗಂಟೆ ೧೨ಕ್ಕೆ ಇನ್ನೇನು ಕೆಲವೇ ನಿಮಿಷಗಳು ಸರಿದಿದ್ದಾರೆ ನಮ್ಮ ಸಂತೋಷಕ್ಕೆ ಪರವೇ ಇರುತ್ತಿರಲಿಲ್ಲ.  ಆಗಲೇ ನೋಡಿ ಕಾದಿತ್ತು, ಅದೆಲ್ಲೂ ಇದ್ದರೋ ಆರಕ್ಷಕರು ನಮ್ಮ್ ಕಣ್ಣು ಮುಂದೆ ಹಾಜರಾದರು. ಸ್ವಲ್ಪ ಸಮಯದ ನಂತರ ಮತ್ತೆ ಶುರುವಾಯ್ತು ನಮ್ಮ ಆಚರಣೆ. ಆದರೆ ಅಷ್ಟರೊಳಗೆ ನಮಗೆ ಅರಿಯದೆ ೨೦೧೩ ನೇ ವರ್ಷಕ್ಕೆ ಕಾಲಿರಿಸಿದ್ದೆವು. 

              ೨೦೧೩ ನೇ ವರುಷಕ್ಕೆ ಕಾಲಿಡುತ್ತಿದ್ದಂತೆ ಬೆಂಕಿಯ ಪ್ರಕರತೆ ಹೆಚ್ಚುತ್ತ ಹೋಯಿತು. ನಿಗಿ ನಿಗಿಯುವ ಕೆಂಡ ಒಂದು ಕಡೆಯಾದರೆ ನೀರಿನಲ್ಲಿ ತೊಳೆದ ಕೆಂಡದಂತೆ ಕಾಣುತಿದ್ದ ನಮ್ಮ ಕರಿಯ ಕುಮಾರ. ಹಾಡುಗಳು ಶುರುವಾದಂತೆ ಕೆಲವರು ಕುಣೆತಕ್ಕೆ ಶುರುಮಾಡಿದರು. ಅದರಲ್ಲೂ ನಮ್ಮ ಪುಟ್ಟನ Belly ಕುಣೆತ, ಗೌಡನ ನಿಶ್ಯಬ್ದದ (ಸೈಲೆಂಟ್ ಮೋಡ್) ಕುಣೆತ, ಆನಂದನ ಎರ್ರಾಬಿರ್ರಿ ಕುಣೆತ, ಅನಿಲನ (ಗ್ವಾಟ)  ಸಂಗೀತಕ್ಕೆ ತಕ್ಕ ಕುಣೆತ ನಮ್ಮೆಲ್ಲರ ಗಮನ ಸೆಳೆದವು. ಜೊತೆಗೆ ನಮ್ಮ್ ಆನಂದನ ಸ್ಪ್ರೈಟ್, ಬಿಯರ್, ಸೋಡಾ, ಕೋಕಾ ಕೋಲಾ ದ ಸ್ನಾನವಂತು ಅದ್ಬುತ. ಕೊನೆಗೆ "ಸತ್ಯ ಹರಿಶ್ಚಂದ್ರ"ನ ಸಿನಿಮಾದ "ಕುಲದಲ್ಲಿ ಮೇಲ್ಯಾವುದೋ ಹುಚ್ಚಪ್ಪ" ಹಾಡಿಗೆ ಎಲ್ಲರು ಸೇರಿ ಹೆಜ್ಜೆ ಹಾಕಿದ್ದು ತುಂಬಾನೇ ಮಜಾ ಕೊಟ್ಟಿತ್ತು. ಪರಮಾತ್ಮನು ಮುಗಿದ ನಂತರ ಊಟ ಮುಗಿಸಿ ಎಲ್ಲರು ಆ ಸ್ಥಳದಿಂದ ಹೊರಟೆವು. ಮತ್ತದೇ ಕೊರೆವ ಚಳಿಯಲಿ  ರಾಜ್ಯ ಹೆದ್ದಾರಿಯಲ್ಲಿ ಸಾಗಿದೆವು. ಬರುವ ದಾರಿಯಲ್ಲಿ ಬಿಡದಿಯ ಸಮೀಪ ಟೀ ಕುಡಿಯಲು ನಿಂತೆವು. ಅಲ್ಲೇ ನಮ್ಮ ಹುಡುಗರು ಮತ್ತೊಮ್ಮೆ ಕುಣೆತ ಶುರು ಮಾಡಿದರು. ಮತ್ತೊಮ್ಮೆ ಮಗದೊಮ್ಮೆ ಎನ್ನುವಂತೆ ಗೆಳೆಯರೆಲ್ಲ ಕಳೆದ ವರ್ಷದ ಸಂಕಲ್ಪವು ನೆರವೇರಿದ ಬಗ್ಗೆ ಮತ್ತು ೨೦೧೩ ರ ವರುಷಕ್ಕೆ ಸಂಕಲ್ಪವನ್ನು ಮಾಡುವುದರ ಬಗ್ಗೆಯೂ ಕೂಡಿ ಚರ್ಚೆ ಮಾಡಿದೆವು. ಅಲ್ಲಿಂದ ಜಾಗ ತೆರವು  ಮಾಡಿದ ನಂತರ ಮನೆಯನ್ನು ಸೇರುವುದರಳೊಗೆ ಸೂರ್ಯನು ಆಗಲೇ ತನ್ನ ಕಣ್ಣನ್ನು ಹೊಡೆಯಲು ಸಿದ್ದವಾಗಿದ್ದನು ಅಂದರೆ ಭರ್ತಿ ೫ ಗಂಟೆ ಆಗಿತ್ತು....

 ಮತ್ತೊಮ್ಮೆ ನನ್ನ ಎಲ್ಲ ಗೆಳೆಯ ಗೆಳತಿಯರಿಗೆ ೨೦೧೩ ನೇ ವರುಷದ ಹಾರ್ದಿಕ ಶುಭಾಶಯಗಳು.....

ಯಾವಾಗಲೂ ಪ್ರೀತಿಯ,
ಇಂತಿ ನಿಮ್ಮವ,

ದಿನೇಶ್.......